Monday, June 8, 2020

ನಾವು ಪಡೆಯುತ್ತಿರುವ ಶಿಕ್ಷಣ ಮೌಲ್ಯಾಧಾರಿತವೇ?

       

ನಾವು ಪಡೆಯುತ್ತಿರುವ ಶಿಕ್ಷಣ ಮೌಲ್ಯಾಧಾರಿತವೇ?
ಶಿಕ್ಷಣ ಮಾನವನ ಪ್ರಗತಿ ಆಧಾರವಾಗಿದೆ. ಇದು ಸಮಾಜದ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪುಸ್ತಕಗಳ ಒಂದು ದೊಡ್ಡ ಸಂಖ್ಯೆಯ ಶಿಕ್ಷಣದ ಮಹತ್ವವನ್ನು ಮೇಲೆ ಬರೆಯಲಾಗಿದೆ. ಶಿಕ್ಷಣ, ದೇಶಭಕ್ತಿಯ ಶಿಸ್ತಿನ ಮತ್ತು ಉತ್ಪಾದಕ ಮಾನವಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಶಿಕ್ಷಣ ಮಾನವಶಕ್ತಿಯನ್ನು ರಾಷ್ಟ್ರದ ಬೆಳೆಸುತ್ತಿರುವ ಅಮೂಲ್ಯ ಆಸ್ತಿಗಳನ್ನು ಹಾಗೂ ಏಜೆಂಟ್ ರೂಪಿಸುತ್ತದೆ. ಶಿಕ್ಷಣ ಮಾನವನ ಸಹಜ ಗುಣಗಳನ್ನು ಅಡೆತಡೆಯಿಲ್ಲದ ಅಭಿವೃದ್ಧಿ ಮೂಲಕ ವ್ಯಕ್ತಿತ್ವದ ಬೆಳೆಸುವಂತಹ ಅರ್ಥ. ಇದು ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿ ಗುರಿಯನ್ನು ಭಾರತ ಒಂದು ಕಲ್ಯಾಣ ರಾಜ್ಯ ಏಕೆಂದರೆ ತಾತ್ವಿಕವಾಗಿ, ನಾಗರಿಕರಿಗೆ ಶಿಕ್ಷಣ ರಾಜ್ಯ ಜವಾಬ್ದಾರಿ. ಇದು ಆರ್ಥಿಕತೆಯ ಸಾಮಾಜಿಕ ವಲಯದ ಅವಿಭಾಜ್ಯ ಭಾಗವಾಗಿದೆ. ಇದು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಪ್ರಮುಖ ಮಾನವ ಸಂಪನ್ಮೂಲಗಳ ಸಾಮರ್ಥ್ಯ ಮತ್ತು ಉತ್ಪಾದಕತೆಯನ್ನು ಸೇರಿಸುತ್ತದೆ. ಅದರ ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಆರ್ಥಿಕ ವಲಯ ಮತ್ತು ದೇಶದ ಸಾಮಾಜಿಕ ವಲಯದ ಕಾರ್ಯಚರಣೆಯ ಮೂಲಕ ಕಾಣಬಹುದು ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯ ವಿವಿಧ ದಕ್ಷಿಣ ಏಷ್ಯಾ ದೇಶಗಳ ಹೋಲುತ್ತದೆ ಹೇಗೆಂದರೆ 17 ವರ್ಷಗಳ ಒಳಗೆ ಮಟ್ಟದ ಮಾಸ್ಟರ್ ಪ್ರಾಥಮಿಕ ಮಟ್ಟದಿಂದ ಶಿಕ್ಷಣ ವ್ಯವಸ್ಥೆ ವಿಂಗಡಿಸಲಾಗಿದೆ ಅಂದರೆ ಆರ್ಥಿಕತೆಯ ಉದಾರೀಕರಣ, ಔದ್ಯೋಗಿಕ ಮತ್ತು ತಾಂತ್ರಿಕ ಎಂಬುದಾಗಿದೆ, ಉದಾಹರಣೆಗೆ ವಿಶ್ವವಿದ್ಯಾನಿಲಯ ಸಾಂಸ್ಥಿಕ ಸಿದ್ಧತೆಗೆ ಶೈಕ್ಷಣಿಕ ಅಭಿವೃದ್ಧಿಯೇ ನಿರ್ಣಾಯಕ ಇದನ್ನೇ ನಾವು ಮೂಲಭೂತ ವ್ಯವಸ್ಥೆ ಎಂದು ಕರೆಯುತ್ತೇವೆ.ಶಿಕ್ಷಣ ಕ್ಷೇತ್ರದ ರಾಜ್ಯ ನೇತೃತ್ವದ ಯಾವಾಗ 1990 ಮೊದಲು ಉತ್ತಮ ಭಾವಿಸಲಾಗಿತ್ತು ಆದರೆ ಶಿಕ್ಷಣ ಸೀಮಿತ ಸಂಪನ್ಮೂಲಗಳನ್ನು 'ಹಂಚಿಕೆ ಅದರ ಬೆಳವಣಿಗೆ ಯೋಜನೆಗಳು ಸೀಮಿತವಿರಬೇಕಾಗಿತ್ತು.ಈ ಗುಣಮಟ್ಟ, ಪ್ರಮಾಣ ಮತ್ತು ಇತರೆ ನಿಯತಾಂಕಗಳನ್ನು ಆಯ್ಕೆಗಳನ್ನು ಕೇಂದ್ರದಲ್ಲಿ ಗ್ರಾಹಕರು ಕೀಪಿಂಗ್ ಉಚಿತ ಶೈಕ್ಷಣಿಕ ಮಾರುಕಟ್ಟೆಗೆ ದಂಡೇ ಕೊಡುಗೆ. ಆದರೆ, ವಾರ್ಷಿಕ ಪರೀಕ್ಷೆಯ ಮಾದರಿ ಪ್ರದರ್ಶನ, ಗುಣಮಟ್ಟದ ಮತ್ತು ಗುಣಮಟ್ಟ ಪರಿಣಾಮಕಾರಿ ಮಾಪನ ವಿಮರ್ಶಕರಿಂದ ವಿವಾದಾತ್ಮಕ ಹೇಳಲಾಗುತ್ತದೆ. ತುಲನಾತ್ಮಕವಾಗಿ, ಸೆಮಿಸ್ಟರ್ ಪರೀಕ್ಷೆ ಈ ನಿಟ್ಟಿನಲ್ಲಿ ಉತ್ತಮ ಮತ್ತು ಇದು ನಿಧಾನವಾಗಿ ಜನಪ್ರಿಯವಾಗುತ್ತಿದೆ.
ಇOದು ಮೂರು ಗಂಟೆಗಳ ನಿಗದಿತ ಸಮಯದಲ್ಲಿ ವಿಷಯದ ಆಧಾರದ ಮೇಲೆ ವಿದ್ಯಾರ್ಥಿ ಕಾರ್ಯಕ್ಷಮತೆಯನ್ನು ನಿರ್ಣಯ ಮಾಡಲು ಅಸಾಧ್ಯ. ಮಹಾನ್ ವ್ಯಂಗ್ಯ ಏನೆಂದರೇ ಉತ್ತಮ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಿದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಿಗಳಾಗುತ್ತಾರೆ ಎಂಬ ಭಾವನೆಯಲ್ಲಿ ಇದ್ದಾರೆ. ಇದು ಹೊಣೆಗಾರಿಕೆಯ ಒಂದು ಅರ್ಥದಲ್ಲಿ ಸಂಪೂರ್ಣವಾಗಿ ಶಿಕ್ಷಕರಲ್ಲಿ ಸಮೀಕರಿಸಿದ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ.
ಇಂದಿನ ಶಿಕ್ಷಣದ ಮಹಾನ್ ನ್ಯೂನತೆಯೆಂದರೆ ಶಿಕ್ಷಣ ಮತ್ತು ತನ್ನ ಮಾರುಕಟ್ಟೆಯ ನಡುವೆ ವ್ಯಾಪಕ ಅಂತರವಿರುತ್ತದೆ ಎಂದು ವಾಸ್ತವವಾಗಿ ಇರುತ್ತದೆ. ನಮ್ಮ ಮಾಧ್ಯಮಿಕ ಶೈಕ್ಷಣಿಕ ವ್ಯವಸ್ಥೆ ಸಮಾನವಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ ಋಣಾತ್ಮಕ ಪ್ರಭಾವವನ್ನು ಹೊಂದಿರುವ ತೊಡರುಗಳನ್ನು ಒಳಗೊಂಡಿದೆ. ಶಿಕ್ಷಣ ಹೇಗಿರಬೇಕೆಂದರೇ ಮೌಖಿಕ ಮತ್ತು ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡುವ, ಹೆಚ್ಚು ಸೃಜನಶೀಲ ಮತ್ತು ಆಸಕ್ತಿದಾಯಕ ಆಗಿರಬೇಕು. ಪಠ್ಯಕ್ರಮವು ಸಂತೋಷದಾಯಕ ಮತ್ತು ಹೊರೆಯಲ್ಲದ ರೀತಿಯಲ್ಲಿ ಇರಬೇಕು.ಪ್ರಾಥಮಿಕ ಮಟ್ಟದಲ್ಲಿ ಸಿಇಟಿ ಮಾದರಿ ಆಯ್ಕೆಗೆ ಬೆಲೆಕೊಡದೆ ವಿಸ್ತೃತ ಬರವಣಿಗೆಯ ಆಧಾರದಲ್ಲಿ ಆಯ್ಕೆಗಳು ನಡೆಯಬೇಕು. ಏಕರೂಪದ ಮತ್ತು ಪಾರದರ್ಶಕ ಮೌಲ್ಯಮಾಪನ ವ್ಯವಸ್ಥೆಯಿಂದ ಮಾತ್ರವೇ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಧ್ಯ.
ಸಂಪನ್ಮೂಲ ಕ್ರೋಡೀಕರಣ ಇಂದಿನ ಶಿಕ್ಷಣ ವ್ಯವಸ್ಥೆಯ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಶಿಕ್ಷಣದಲ್ಲಿ ಬಂಡವಾಳ ಶೈಕ್ಷಣಿಕ ಅಭಿವೃದ್ಧಿಯ ಕೋರ್ ಅಂಶವಾಗಿದೆ. ಇದರ ಸಲುವಾಗಿಯೇ ಇಂದು ಶಿಕ್ಷಣದ ವ್ಯಾಪಾರೀಕರಣ ಆಗುತ್ತಿದೆ.ಇದನ್ನು ತಪ್ಪಿಸಬೇಕೆಂದರೆ ಸರ್ಕಾರಗಳು ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಧನ ಸಹಾಯ ಮಾಡಿದರೆ ಅವರಿಗೆ ಇನ್ನು ಹೆಚ್ಚಿನ ಹಾಗು ಮೌಲ್ಯಯುತ ಶಿಕ್ಷಣವನ್ನು ನೀಡಲು ಸಹಕಾರಿಯಾಗುತ್ತದೆ.
ಶಿಕ್ಷಣದ ವ್ಯಾಪಾರೀಕರಣ ಇಂದು ಕೇವಲ ವೃತ್ತಿ ಶಿಕ್ಷಣಕ್ಕೆ ಸೀಮಿತಗೊಂಡಿಲ್ಲ. ಅದು ಕೆ.ಜಿ. ತರಗತಿಯಿಂದ ಪ್ರಾರಂಭವಾಗಿ ಉನ್ನತ ಶಿಕ್ಷಣದವರೆಗೆ ಎಲ್ಲಾ ಹಂತಗಳನ್ನೂ ವ್ಯಾಪಿಸಿದೆ. ಎಲ್ಲಿಯವರೆಗೆ ಸಮಾನ ಅಥವಾ ಏಕರೂಪಿ ಶಿಕ್ಷಣ ನೀತಿ ಜಾರಿಗೆ ಬರುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಎಲ್ಲಿಯವರೆಗೆ ವಾಣಿಜ್ಯೀಕರಣ ಪ್ರಕ್ರಿಯೆ ಜಾರಿಯಲ್ಲಿರುತ್ತದೋ ಅಲ್ಲಿಯವರೆಗೆ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಸುಶಿಕ್ಷಿತ ವರ್ಗ ತಾನು, ತನ್ನ ಮನೆ, ತನ್ನ ಕುಟುಂಬ ಎಂಬ ಸಂಕುಚಿತ ಆಲೋಚನೆಯಲ್ಲೇ ಬದುಕಲು ವಾಣಿಜ್ಯೀಕೃತ ಶಿಕ್ಷಣ ವ್ಯವಸ್ಥೆಯೂ ಒಂದು ಕಾರಣ. ಸಮಾಜದ ದುರ್ಬಲರ ಕಷ್ಟ-ಸಂಕಷ್ಟಗಳಿಗೆ ಸುಶಿಕ್ಷಿತ ವರ್ಗ ಅಂಧವಾಗಿರುತ್ತದೆ.
ಲಕ್ಷಾಂತರ ರೂಪಾಯಿ ಫೀಸುಗೆ ಬರುವ ಸಂಸ್ಥೆಗಳಲ್ಲಿ ಕೆ.ಜಿ ಶಿಕ್ಷಣ ಕೊಡುವುದೇ ಕೆಲವು ಹೆತ್ತವರಿಗೆ ಪ್ರತಿಷ್ಠೆಯ ವಿಚಾರ. ಇಂತಹ ಹೆತ್ತವರು ಏನು ಭಾವಿಸುತ್ತಾರೆಂದರೆ ತಾವು ತಮ್ಮ ಮಕ್ಕಳಿಗೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ. ಖಂಡಿತವಾಗಿಯೂ ಅವರ ಎಣಿಕೆ ತಪ್ಪು. ಅವರು ಮೂಲಕ ತಮ್ಮ ಮಕ್ಕಳಿಗೆ ಐಷಾರಾಮಿ ಬದುಕನ್ನು ಎಳವೆಯಲ್ಲಿಯೇ ತೋರಿಸಿಕೊಡುತ್ತಾರೆಯೇ ಹೊರತು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡುತ್ತಿಲ್ಲ. ಜೀವನದ ನೈಜ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಅವರಿಗೆ ಬದುಕಿನ ವಾಸ್ತವವನ್ನು ತಿಳಿಸಿಕೊಡುತ್ತಿಲ್ಲ.
ಖಂಡಿತವಾಗಿಯೂ ದುಡ್ಡು ಚಾಚುವ ಶಿಕ್ಷಣ ಸಂಸ್ಥೆಗಳಿಂದ ನಮ್ಮ ಮಕ್ಕಳು ಬದುಕಿನ ಕಟು ವಾಸ್ತವವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಜೀವನದ ಮೌಲ್ಯಗಳು ಅರ್ಥವಾಗಬೇಕಾದರೆ ಸಮಾಜದ ಕೆಳವರ್ಗದ ಜನರ ನೋವು-ನಲಿವುಗಳು ಅರ್ಥವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಕೂತು ಕಲಿಯುವ ಶಾಲೆಗಳಲ್ಲಿ ಮಾತ್ರ ಬದುಕಿನ ಕಟುವಾಸ್ತವಗಳನ್ನು ಅರಿಯಲು ಸಾಧ್ಯ. ಇಂತಹ ವಾಸ್ತವಗಳನ್ನು ಅರಿತ ಮಕ್ಕಳಿಂದ ಮಾತ್ರ ನಾವು ಜೀವನದ ಮೌಲ್ಯಗಳನ್ನು ನಿರೀಕ್ಷಿಸಲು ಸಾಧ್ಯ. ಏಕರೂಪೀ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಇದು ಸಾಧ್ಯ
ಕೇ.ಜಿ ತರಗತಿಗೆ ಲಕ್ಷಾಂತರ ರೂಪಾಯಿ ಫೀಸು ಪಡೆಯುವ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ನಾವು ನಮ್ಮ ಮಕ್ಕಳಿಗೆ ಶಿಕ್ಷಕರಿಂದ ಖಾಸಗಿಯಾಗಿ ಮನೆಪಾಠ (ಹೋಂ ಟ್ಯೂಷನ್) ನೀಡಲು ಒತ್ತಡ ಹೇರುತ್ತದೆ. ಇದು ಅವರು ನೀಡುವ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ. ಹೇಗೆಂದರೆ ಸರಕಾರಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಮಕ್ಕಳು ಯಾವುದೇ ಟ್ಯೂಷನ್ ಪಡೆಯದೇ ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಇವರು ಇಷ್ಟೆಲ್ಲಾ ದುಡ್ದು ಗೆಬರಿಯೂ ಹೋಂ ಟ್ಯೂಷನ್ ಕೊಡಿಸಬೇಕೆಂದರೆ ಏನರ್ಥ..?
ಸಂಜೆ ಹೊತ್ತಿಗೆ ಹೋಂ ಟ್ಯೂಷನ್ ನೀಡುವ ಮೂಲಕ ನಾವು ನಮ್ಮ ಮಕ್ಕಳ ಬಾಲ್ಯವನ್ನು, ಅವರ ಸಹಜ ಬದುಕನ್ನು ಅವರಿಂದ ಕಸಿದುಕೊಳ್ಳುತ್ತೇವೆ ಎಂಬ ವಾಸ್ತವ ನಮ್ಮರಿವಿಗೆ ಬರುವುದೇ ಇಲ್ಲ. ಶಾಲೆಯಿಂದ ಹಿಂದುರಿಗಿ ಬಂದ ಮಕ್ಕಳನ್ನು ಮತ್ತೆ ಟ್ಯೂಷನ್ಗೆ ಕಳುಹಿಸಿ ಅವರ ಸಾಯಂಕಾಲವನ್ನು ಅವರಿಂದ ಕಸಿದು ನಾವು ಅಂಕಗಳಿಸುವ ಯಂತ್ರಗಳನ್ನಾಗಿಸುತ್ತೇವೆ. ಮಕ್ಕಳ ಬಾಲ್ಯ ಸಹಜ ಚೇಷ್ಟೆಗಳಿಂದ, ದೈಹಿಕ ಶ್ರಮದ ಆಟದಿಂದ ಅವರನ್ನು ನಾವು ವಂಚಿಸುತ್ತೇವೆ. ಸದಾ ಒಂದೇ ರೀತಿಯ ಯಾಂತ್ರಿಕ ಬದುಕಿನಿಂದಾಗಿ ಮಕ್ಕಳಿಗೆ ಖಿನ್ನತೆಯಂತಹ ಮಾನಸಿಕ ಖಾಯಿಲೆಗಳು ಬಾಧಿಸುವ ಸಾಧ್ಯತೆಯಿದೆ. ಬರೇ ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್ಗಳಿಗಷ್ಟೇ ಮಕ್ಕಳ ಮನರಂಜನೆಯನ್ನು ಸೀಮಿತಗೊಳಿಸುತ್ತೇವೆ. ಇನ್ನೂ ಹೆಚ್ಚಿನ ಮನರಂಜನೆಯೆಂದರೆ ಚಾನೆಲ್ಗಳ ವೀಕ್ಷಣೆ. ದೈಹಿಕ ಶ್ರಮದ ಆಟಗಳನ್ನು ಮಕ್ಕಳಿಗೆ ನಿರಾಕರಿಸುವ ಮೂಲಕ ಹೆತ್ತವರು ತಮ್ಮ ಮಕ್ಕಳಲ್ಲಿ ಬೊಜ್ಜು ಬೆಳೆಸುತ್ತಾರೆ. ಇದರ ದೂರಗಾಮಿ ಪರಿಣಾಮವನ್ನು ವಿವರಿಸಬೇಕಾದ ಅಗತ್ಯವೇ ಇಲ್ಲ.
ಶಿಕ್ಷಣದ ವ್ಯಾಪಾರೀಕರಣದ ಭರಾಟೆಯಲ್ಲಿ ಇಂದು ಒಂದು ಶಾಲೆಯೆಂದರೆ ಹೇಗಿರಬೇಕೆಂಬ ಪರಿಕಲ್ಪನೆಯೇ ಇಲ್ಲವಾಗಿದೆ. ಒಂದು ಶಾಲೆಯೆಂದರೆ ಅದಕ್ಕೆ ಸರಿಯಾದ ಕೊಠಡಿಗಳಿರಬೇಕು, ಕೊಠಡಿಯಲ್ಲಿ ಸಮರ್ಪಕವಾಗಿ ಗಾಳಿ ಮತ್ತು ಬೆಳಕು ಹರಿದಾಡಬೇಕು, ಸರಿಯಾದ ಪೀಠೋಪಕರಣಗಳಿರಬೇಕು, ಸಾಕಷ್ಟು ಸಂಖ್ಯೆಯ ಶೌಚಾಲಯಗಳಿರಬೇಕು, ವಿಶಾಲವಾದ ಆಟದ ಮೈದಾನವಿರಬೇಕು. ಇಂದು ಅಲ್ಲಲ್ಲಿ ಕೇವಲ ದುಡ್ಡು ಚಾಚುವ ಉದ್ದೇಶದಿಂದಲೇ ನಾಯಿಕೊಡೆಗಳಂತೆ ತಲೆಯೆತ್ತುವ ಅದೆಷ್ಟೋ ಖಾಸಗಿ ಶಾಲೆಗಳನ್ನು ವಾಣಿಜ್ಯ ಕಟ್ಟಡಗಳ ಮಹಡಿಗಳಲ್ಲಿ ನಡೆಸಲಾಗುತ್ತಿದೆ. ಇಂತಹ ಹೆಚ್ಚಿನೆಲ್ಲಾ ಶಾಲೆಗಳ ತರಗತಿ ಕೊಠಡಿಯಲ್ಲಿ ಶುದ್ಧ ಗಾಳಿ ಮತ್ತು ಬೆಳಕಿರುವುದಿಲ್ಲ. ವಾಣಿಜ್ಯ ಉದ್ದೇಶಗಳಿಗೆ ನಿರ್ಮಿಸಲ್ಪಟ್ಟ ಕಟ್ಟಡಗಳಲ್ಲಿ ಅವುಗಳ ಅಗತ್ಯಕ್ಕೆ ತಕ್ಕಂತೆ ನಿರ್ಮಾಣಗಳಿರುತ್ತವೆ. ವಾಣಿಜ್ಯ ಸಂರ್ಕೀಣಗಳಲ್ಲಿ ಶಾಲೆಯ ವಾತಾವರಣ ಖಂಡಿತ ಇರುವುದಿಲ್ಲ. ಒಟ್ಟಿನಲ್ಲಿ ಅನೇಕ ಹೆತ್ತವರು ಮಕ್ಕಳ ಉತ್ತಮ ಭವಿಷ್ಯದ ಕನಸಿನಲ್ಲಿ ಶಿಕ್ಷಣವನ್ನು ಬಿಕರಿಗಟ್ಟಿರುವ ಸಂತೆಗಳಿಗೆ ಮಕ್ಕಳನ್ನು ಸೇರಿಸಿ ಅವರ ವರ್ತಮಾನದ ನೆಮ್ಮದಿಯನ್ನು ಕಸಿಯುತ್ತಾರೆ.
ಪ್ರ್ರೌಡಶಾಲಾ ಶಿಕ್ಷಣ ಮುಗಿದಾಕ್ಷಣ ಮಕ್ಕಳ ಭವಿಷ್ಯದ ಕುರಿತಂತೆ ಹೆಚ್ಚೆಚ್ಚು ತಲೆ ಕೆಡಿಸುವ ಹೆತ್ತವರು ತಮ್ಮ ಮಕ್ಕಳನ್ನು ಸ್ವಘೋಷಿತ ಪ್ರತಿಷ್ಠಿತ ಕಾಲೇಜುಗಳಿಗೆ ಸೇರಿಸಲು ಆತುರಪಡುತ್ತಾರೆ. ಕೈಯಲ್ಲಿ ಪುಡಿಗಾಸಿದ್ದವರು ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಕಾಲೇಜುಗಳ ಮಾನದಂಡನೆಯ ಅಂಕಗಳಿಲ್ಲದಿದ್ದರೂ ಕಾಸಿನ ಬಲದಿಂದ ಅಂತಹ ಕಾಲೇಜುಗಳಿಗೆ ಸೇರಿಸಿಬಿಡುತ್ತಾರೆ. ಯಾವ ಕಾಲೇಜಲ್ಲೂ ಹೆಚ್ಚು ದುಡ್ಡು ಕೊಟ್ಟು ಬಂದವರೆಂದು ವಿಶೇಷ ಶಿಕ್ಷಣ ನೀಡುವುದಿಲ್ಲ.
ಸಾಮಾನ್ಯವಾಗಿ ಪ್ರತಿಷ್ಠಿತ ಕಾಲೇಜುಗಳು ಶೇಕಡಾ 75-80 ಮೇಲ್ಪಟ್ಟು ಅಂಕಪಡೆದವರಿಗೆ ಮಾತ್ರ ಪ್ರವೇಶಾತಿ ನೀಡುತ್ತದೆ. ಅಂಕಬಲವಿಲ್ಲದವರಿಗೆ ಧನಬಲದ ಆಧಾರದಲ್ಲಿ ಪ್ರವೇಶಾತಿ ನೀಡುತ್ತದೆ. ಸರಕಾರಿ ಕಾಲೇಜುಗಳಲ್ಲಿ ಮತ್ತು ಇತರ "ಪ್ರತಿಷ್ಠಿತ" ವಲ್ಲದ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೆಲ್ಲರೂ 35-45% ಅಂಶ ಪಡೆದವರು, ಎರಡನೇ, ಮೂರನೇ ಯತ್ನದಲ್ಲಿ ಉತ್ತೀರ್ಣರಾದವರು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಡಿಶನಲ್ ಟ್ಯೂಷನ್ ಪಡೆಯುವಂತೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಒತ್ತಡ ಹೇರುತ್ತದೆ. ಅದಾಗ್ಯೂ ಕಾಲೇಜುಗಳ ಫಲಿತಾಂಶ 70-80% ದಷ್ಟಿರುತ್ತವೆ. 35-45% ಅಂಕ ಪಡೆದು ಬಂದ, ಎರಡು-ಮೂರನೇ ಯತ್ನದಲ್ಲಿ ಉತ್ತಿರ್ಣರಾಗಿ ಬಂದ, ಯಾವುದೇ ಆಡಿಶನಲ್ ಟ್ಯೂಷನ್ ಪಡೆಯದ ವಿದ್ಯಾರ್ಥಿಗಳಿಂದಲೇ ತುಂಬಿದ ಕಾಲೇಜುಗಳು 60-70% ಫಲಿತಾಂಶ ಪಡೆಯುತ್ತವೆ. ( ಸತ್ಯವನ್ನು ಯಾರು ಬೇಕಾದರೂ ಸರ್ವೇ ನಡೆಸಿ ಪರಿಶೀಲಿಸಬಹುದು) ಇವೆರಡು ವಿಧಗಳ ಕಾಲೇಜುಗಳಲ್ಲಿ ಯಾವುದು ಉತ್ತಮ ಎಂಬುದನ್ನು ಓದುಗರೇ ನಿರ್ಧರಿಸಬಹುದು.
ಇನ್ನು ವೃತ್ತಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣದ ಕೆಲವು ನಮೂನೆಗಳು ಮತ್ತು ಅದರ ಪರಿಣಾಮಗಳನ್ನು ನೋಡೋಣ. ವಿದ್ಯಾರ್ಥಿಗಳನ್ನು ಗೌರವಾನ್ವಿತ ಗ್ರಾಹಕರೆಂದೂ, ಅವರನ್ನು ಗೌರವಿಸಿ ಎಂದು ಅಧ್ಯಾಪಕರಿಗೆ ಆದೇಶಿಸುವ ಶಿಕ್ಷಣ ಸಂಸ್ಥೆಗಳು ಗುರು-ಶಿಷ್ಯ ಸಂಬಂಧಕ್ಕೆ ಎಳ್ಳು ನೀರು ಬಿಡುತ್ತವೆ. ವಿದ್ಯಾರ್ಥಿಗಳನ್ನು ಗೌರವಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಅಧ್ಯಾಪಕರುಗಳು ಅಲ್ಲಿ ಜೀತದಾಳುಗಳಂತಿರುತ್ತಾರೆ ಎಂಬುವುದನ್ನು ಪ್ರತ್ಯೇಕ ವಿವರಿಸಬೇಕಾದ ಅಗತ್ಯ ಬೀಳದು. ಇಂತಹ ಕಾಲೇಜುಗಳು ಬರೀ ರಿಸಲ್ಟ್ ಓರಿಯೆಂಟೆಡ್ ಕಾಲೇಜುಗಳಾಗಿರುತ್ತವೆ. ತಮ್ಮ ಸಂಸ್ಥೆ ಪಡೆದಿರುವ ಫಲಿತಾಂಶವನ್ನು ಪ್ರದರ್ಶಿಸಿ ಜಾಹೀರಾತು ಮಾಡುತ್ತವೆ. ಆದರೆ ಅಲ್ಲಿ ಎಲ್ಲವೂ ಸರಿಯಿರುವುದಿಲ್ಲ ಎಂಬುವುದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ನನ್ನ ಆಪ್ತರಾದ ಕೆಲವು ಉಪನ್ಯಾಸಕರು ಹೇಳುವ ಪ್ರಕಾರ ಅಲ್ಲಿನ ಅಟೆಂಡೆನ್ಸ್ ಸಿಸ್ಟಂ ದಿಗಿಲು ಹುಟ್ಟಿಸುತ್ತದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿ, ಹಾಜರಾಗದಿರಲಿ ಪರೀಕ್ಷೆ ಕುಳಿತುಕೊಳ್ಳಲು ಬೇಕಾದಷ್ಟು ಹಾಜರಿ ನೀಡಬೇಕು. ಅವರು ಅರ್ಹರಿರಲಿ, ಇಲ್ಲದಿರಲಿ ಆಂತರಿಕ ಮೌಲ್ಯಮಾಪನ (Internal Assessment) ದಲ್ಲಿ ಭರ್ತಿ ಅಂಕ ನೀಡಬೇಕು. ವಿದ್ಯಾರ್ಥಿಗಳ ಅರ್ಹತೆಯನ್ನು ಪರಿಗಣಿಸುವ ಯಾವ ಹಕ್ಕೂ ಅಧ್ಯಾಪಕನಿಗಿರುವುದಿಲ್ಲ. ಆಡಳಿತ ಮಂಡಳಿ ಏನು ನಿರ್ದೇಶನ ನೀಡುತ್ತದೋ ಅದನ್ನು ಪಾಲಿಸಬೇಕು. ತರಗತಿಗಳಿಗೆ ಮೊಬೈಲ್ ಫೋನ್ ತರಬಾರದೆಂದು ಕಟ್ಟೆಚ್ಚರವನ್ನು ಆಡಳಿತ ಮಂಡಳಿ ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮತ್ತು ಮೊಬೈಲ್ ಸೀಝ್ ಮಾಡುವ ಹಕ್ಕನ್ನೂ ಅಧ್ಯಾಪಕರುಗಳಿಗೆ ನೀಡಿರುತ್ತವೆ. ಅಂತೆಯೇ ಅಧ್ಯಾಪಕರುಗಳು ಸೀಝ್ ಮಾಡಿದ ಮೊಬೈಲ್ಗಳನ್ನು ವಿದ್ಯಾರ್ಥಿಗಳಿಗೆ ಮರಳಿ ನೀಡುವ ಹಕ್ಕನ್ನು ಆಡಳಿತ ಮಂಡಳಿ ಕಾಯ್ದಿರಿಸುತ್ತದೆ. ಅಧ್ಯಾಪಕರುಗಳು ತರಗತಿಗಳಲ್ಲಿ ಮೊಬೈಲ್ ಬಳಸಿದ ವಿದ್ಯಾರ್ಥಿಗಳ ಮೊಬೈಲನ್ನು ಸೀಝ್ ಮಾಡಿ ಸಂಬಂಧಪಟ್ಟವರಿಗೆ ಒಪ್ಪಿಸುತ್ತಾರೆ. ಅವರು ಅದನ್ನು ಮರಳಿ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಇಂತಹವುಗಳು ಅನೇಕ ಕಾಲೇಜುಗಳಲ್ಲಿ ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳ ಕೈಯಿಂದ ಮೊಬೈಲ್ ಸೀಝ್ ಮಾಡಿದ ಅಧ್ಯಾಪಕರುಗಳನ್ನು ದುಡ್ಡಿನ ದರ್ಪದ ವಿದ್ಯಾರ್ಥಿಗಳು ಬಫೂನ್ಗಳಂತೆ ಅಣಕಿಸುತ್ತಾರೆ. ಕೇವಲ ಧನಬಲದಿಂದ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು 100% ಫಲಿತಾಂಶ ನೀಡಬೇಕೆಂದು ಆಡಳಿತ ಮಂಡಳಿ ಅಧ್ಯಾಪಕ ವರ್ಗದ ಮೇಲೆ ಒತ್ತಡ ಹೇರುತ್ತದೆ. ಶಿಕ್ಷಣ ಸಂಸ್ಥೆಗಳ ವ್ಯಾಪಾರ ವೃದ್ಧಿಯಾಗಬೇಕಾದರೆ 100% ಫಲಿತಾಂಶ ತೋರಿಸಬೇಕು. 100% ಫಲಿತಾಂಶ ನೀಡಬೇಕೆಂದು ಅಧ್ಯಾಪಕರುಗಳ ಮೇಲೆ ಒತ್ತಡ ಹೇರುವ ಬಂಡವಾಳಶಾಹಿಗಳ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತೀರಾ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಅಟೆಂಡೆನ್ಸ್ ನೀಡಿ ಎಂಬ ಆದೇಶವನ್ನು ಅಧ್ಯಾಪಕ ವರ್ಗಕ್ಕೆ ನೀಡುತ್ತದೆ. ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಂದ 100% ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ? ಇಂತಹ ಸಂಸ್ಥೆಗಳು ಗುಣಮಟ್ಟದ ವೃತ್ತಿಪರರನ್ನು ಸಮಾಜಕ್ಕೆ ನೀಡಲು ಸಾಧ್ಯವೇ ಇಲ್ಲ. ಕೇವಲ ಧನಬಲದಿಂದ ಪದವಿ ಪಡೆದು ಹೊರಬರುವ ವೃತ್ತಿಪರರಿಂದ ವೃತ್ತಿಯಲ್ಲಿ ಕನಿಷ್ಠ ಮಟ್ಟದ ಎಥಿಕ್ಸನ್ನು ಮತ್ತು ನೈತಿಕತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಇನ್ನು ಜನರ ಪ್ರಾಣ ರಕ್ಷಿಸಬೇಕಾದ ವೈದ್ಯರುಗಳನ್ನು ತಯಾರಿಸುವ ಮೆಡಿಕಲ್ ಕಾಲೇಜುಗಳ ಕಥೆಗಳಂತೂ ಪ್ರಜ್ಞಾವಂತರನ್ನು ಭಯಭೀತರಾಗಿಸಬಹುದು. ಕೇವಲ ದುಡ್ಡಿನಿಂದಾಗಿ ವೈದ್ಯನಾಗುವ ಮೂಲ ಅರ್ಹತೆಗಳೇ ಇಲ್ಲದ ಶ್ರೀಮಂತರ ಮಕ್ಕಳಿಗೆ ಖಾಸಗಿ ಮೆಡಿಕಲ್ ಕಾಲೇಜುಗಳು ಸೀಟು ನೀಡುತ್ತವೆ. ಇಂದಿನ ವ್ಯಾಪಾರೀಕರಣದ ಯುಗದಲ್ಲಿ ನಿಜವಾದ ಅರ್ಹತೆಯುಳ್ಳ ಬಡವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕನಸೂ ಕಾಣುವಂತಿಲ್ಲ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ನಲ್ಲಿ ಸೀಟು ಪಡೆದರೆ ಮಾತ್ರ ಬಡವಿದ್ಯಾರ್ಥಿಗಳು ವೈದ್ಯರಾಗಬಹುದು.NEET/AIMS/AIPMR ಪರೀಕ್ಷೆಗಳಲ್ಲಿ ಉನ್ನತ ರ್ಯಾಂಕ್ ಪಡೆದವರ ಹೊರತಾಗಿ ಇತರರು ಪ್ರವೇಶ ಪಡೆಯಬೇಕೆಂದರೆ ಕನಿಷ್ಠ 15 ರಿಂದ 20 ಲಕ್ಷ ರೂಪಾಯಿಗಳ ಗಂಟು ಬೇಕೇ ಬೇಕು. ಶೈಕ್ಷಣಿಕ ಸಾಲ ನೀಡುವ ಎಲ್ಲಾ ಬ್ಯಾಂಕ್ಗಳೂ ವಿದ್ಯಾರ್ಥಿಯ ಹೆತ್ತವರ ಸಂಪತ್ತು ನೋಡಿಯೇ ಸಾಲ ನೀಡುತ್ತದೆ. ಸ್ವಂತ ಮನೆಯೂ ಇರದ ಅಥವಾ ಆಶ್ರಯ ಮನೆಯಲ್ಲಿ ವಾಸಿಸುವ ಯಾವ ವಿದ್ಯಾರ್ಥಿಗೂ ಬ್ಯಾಂಕ್ಗಳು ಶೈಕ್ಷಣಿಕ ಸಾಲ ಸುತರಾಂ ನೀಡುವುದಿಲ್ಲ. ಇದನ್ನು ಯಾರು ಬೇಕಾದರೂ ಪರೀಕ್ಷಿಸಿ ನೋಡಬಹುದು. ಕೇವಲ ದುಡ್ಡಿನ ಬಲದಿಂದಲೇ ವೈದ್ಯರಾಗುವವರಿಗೆ ಸಮಾಜದ ತಳವರ್ಗದ ಜನರ ಭಾವನೆಗಳು ಅರ್ಥವಾಗುವುದೇ ಇಲ್ಲ. ದುಡ್ಡು ಕೊಟ್ಟು ವೈದ್ಯರಾದವರು ದುಡ್ಡಿನ ಹೊರತಾಗಿ ಬೇರೇನನ್ನೂ ಯೋಚಿಸುವುದಿಲ್ಲ. ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಅಥವಾ 20-25 ಲಕ್ಷ ಖರ್ಚು ಮಾಡಿ ವೈದ್ಯಕೀಯ ಪದವಿ ಪಡೆದವನಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ಸರಕಾರ ಆದೇಶಿಸಿದರೆ ಆತ ಹೇಗೆ ತಾನೇ ಹೋಗಲು ಸಿದ್ಧನಿರುತ್ತಾನೆ? ಇಂದು ಕಮಿಷನ್ ಇಲ್ಲದೇ ವೃತ್ತಿ ನಿರ್ವಹಿಸುವ ವೈದ್ಯರು ಬಹು ವಿರಳ. ಒಂದೆಡೆ ಡಯೋಗ್ನೋಸ್ಟಿಕ್ ಸೆಂಟರ್ಗಳಿಂದ ಕಮಿಷನ್, ಇನ್ನೊಂದೆಡೆ ಔಷಧೀಯ ಕಂಪೆನಿಗಳ ಗಿಫ್ಟ್ ವೋಚರ್ಗಳು ವೈದ್ಯರನ್ನು ಸಮಾಜದ ನೋವಿಗೆ ಕುರುಡಾಗಿಸಿವೆ.
ಪ್ರತಿದಿನವೂ ವೈದ್ಯರ ಕ್ಲಿನಿಕ್ಗಳಿಗೆ ಎಡತಾಕುವ ಕಂಪೆನಿ ಪ್ರತಿನಿಧಿಗಳು ದಿನಕ್ಕೊಂದು ಬಗೆಯ ಹೊಸ ಹೊಸ ಔಷಧಿಯನ್ನು ಪರಿಚಯಿಸುತ್ತಾರೆ. ದುಡ್ಡೇ ದೊಡ್ಡಪ್ಪ ಎನ್ನುವ ವೈದ್ಯರುಗಳ ಪಾಲಿಗೆ ಅವರು ಕಾಮಧೇನುಗಳು. ಕೆಲವು ವೈದ್ಯರುಗಳು ರೋಗಿಯ ಆರ್ಥಿಕ ಸ್ಥಿತಿಯ ಬಗ್ಗೆ ಗಮನಹರಿಸುವುದೇ ಇಲ್ಲ. ಇವರಿಗೆ ತಾವು ಶಿಕ್ಷಣ ಪಡೆಯಲು ಹಾಕಿದ ಬಂಡವಾಳವನ್ನು ವಾಪಾಸು ಗಳಿಸಬೇಕು.
ಕೆಲವೇ ಮೆಡಿಕಲ್ ಕಾಲೇಜುಗಳನ್ನು ಬಿಟ್ಟರೆ ಹೆಚ್ಚಿನೆಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳೇ  ಇಲ್ಲ. ಕೇವಲ ಕಟ್ಟಡ ಕಟ್ಟಿ ಆಸ್ಪತ್ರೆ ಎಂಬ ಬೋರ್ಡ್ ನೇತಾಡಿಸಿ ಒಂದಷ್ಟು ಜನರನ್ನು ಬೆಡ್ಗಳಲ್ಲಿ ಮಲಗಿಸಿ ರೋಗಿಗಳೆಂದು ಹೇಳಿ M.C.I. ನಿಂದ ಮಂಜೂರಾತಿ ಪಡೆದುಕೊಂಡು ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರೆ. ಅಲ್ಲಿ ಕಣ್ಣಿಗೆ ಕಾಣುವುದೆಲ್ಲವೂ ನಿಜವಲ್ಲ ಎಂಬ ಸತ್ಯವನ್ನು M.C.I. ಅಧಿಕಾರಿಗಳು ಅರಿತಿರುತ್ತಾರೆ. ಅವರು ಆಡಳಿತ ಮಂಡಳಿಯ ಮಾತಿಗೆ ಕಟ್ಟುಬಿದ್ದು ಮಂಜೂರಾತಿ ನೀಡಿ ಹೋಗುತ್ತಾರೆ. ಮೆಡಿಕಲ್ ಕಾಲೇಜುಗಳು ಪ್ರತೀ ವರ್ಷವೂ ಹೆಚ್ಚುವರಿ ಪ್ರವೇಶಾತಿಗೆ ಅನುಮತಿ ಕೋರಿ M.C.I. ಮೊರೆ ಹೋಗುತ್ತವೆ. ಸಂದರ್ಭದಲ್ಲಿ M.C.I. ಇನ್ಸ್ಪೆಕ್ಷನ್ ಎಂಬ ನಾಟಕವಾಡುತ್ತದೆ. ಇನ್ಸ್ಪೆಕ್ಷನ್ ಕಾಲದಲ್ಲಿ ಆಸ್ಪತ್ರೆಯ ಬೆಡ್ಗಳ ಮೇಲೆ ಮಲಗಲು ಸಂಸ್ಥೆಗಳು ಬಾಡಿಗೆ ರೋಗಿಗಳನ್ನು ಹಿಡಿದು ತರುತ್ತಾರೆ. ಮಾತ್ರವಲ್ಲ ಬಾಡಿಗೆ ವೈದ್ಯರನ್ನು, ಬಾಡಿಗೆ ಅರೆವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸುತ್ತದೆ. ಇವ್ಯಾವುವೂ M.C.I. ಮಂದಿಗೆ ತಿಳಿಯದ ವಿಚಾರಗಳೇನಲ್ಲ. ಶಿಕ್ಷಣ ವ್ಯಾಪಾರಿಗಳು ನೀಡುವ ಆಮಿಷದ ಮುಂದೆ ಅವೆಲ್ಲವೂ ಗೌಣ.
ಡೀಮ್ಡ್ ಯುನಿವರ್ಸಿಟಿಗಳ ಕಥೆಯಂತೂ ಕೇಳುವುದೇ ಬೇಡ. ಅಲ್ಲಿ ಎಂತಹ ದಡ್ಡನೂ ಪಾಸಾಗಿ ಪದವಿ ಪಡೆಯುತ್ತಾನೆ. ಡೀಮ್ಡ್ ಯುನಿವರ್ಸಿಟಿಗಳಿರುವುದೇ ನಾಲಾಯಕ್ಗಳಿಗೆ ವೈದ್ಯಕೀಯ, ತಾಂತ್ರಿಕ ಪದವಿ ನೀಡುವುದಕ್ಕೆ ಎಂಬಷ್ಟರ ಮಟ್ಟಿಗೆ ಅವುಗಳ ಗುಣಮಟ್ಟ ಕುಸಿದಿವೆ. ಇತ್ತೀಚಿನ ವರ್ಷಗಳಲ್ಲಿ ಮಲ್ಟಿಮಿಲಿಯನರ್ಸ್ಗಳು ತಮ್ಮ ನಾಲಾಯಕ್ ಮಕ್ಕಳನ್ನು ವೈದ್ಯರನ್ನಾಗಿಯೋ, ಇಂಜಿನಿಯರ್ಗಳನ್ನಾಗಿಯೋ ಮಾಡಲು ಇಂತಹ ದುಡ್ಡು ಗೆಬರುವ ಡೀಮ್ಡ್ ಯುನಿವರ್ಸಿಟಿಗಳನ್ನೇ ಅವಲಂಬಿಸುತ್ತಿದ್ದಾರೆ.
ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣವು ಜಾಗತೀಕರಣ, ಖಾಸಗೀಕರಣ, ನವಾಉದಾರೀಕರಣದ ದುಷ್ಪರಿಣಾಮಗಳು. ಇವು ನಿಸ್ಸಂಶಯವಾಗಿಯೂ ಮಾನವೀಯತೆಯನ್ನು ಕೊಲ್ಲುತ್ತದೆ. ಕೊಳ್ಳುಬಾಕ ಸಂಸ್ಕೃತಿ ಹೆತ್ತ ಅಮ್ಮ-ಅಪ್ಪಂದಿರನ್ನೂ, ಒಡ-ಹುಟ್ಟಿದವರನ್ನು ಹೆಂಡತಿ-ಮಕ್ಕಳನ್ನೂ ಗ್ರಾಹಕ ಎಂಬ ದೃಷ್ಟಿಯಲ್ಲೇ ನೋಡಲು ಕಲಿಸುತ್ತದೆ. ವಾಣಿಜ್ಯೀಕರಣಗೊಂಡ ಶಿಕ್ಷಣ ಸಂಸ್ಥೆಗಳು ಇಂದಿನ  ಯುವ ಪೀಳಿಗೆಗೆ ಎಲ್ಲವನ್ನೂ ವ್ಯಾಪಾರೀಕರಣದ ದೃಷ್ಟಿಯಲ್ಲೇ ನೋಡುವುದನ್ನು ಕಲಿಸುತ್ತಿವೆ.
ಲೇಖಕರು
ಜೆ. ಕೆ. ಪ್ರಸನ್ನಕುಮಾರ್
ಸಹಾಯಕ ಪ್ರಾದ್ಯಾಪಕರು
ಬಿ ಟಿ , ದಾವಣಗೆರೆ